ಕಲಬುರಗಿ : ರಿಯಲ್ ಎಸ್ಟೇಟ್ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರದ ಟಿಪ್ಪು ಕಾಲೇಜು ಬಳಿ ಉದ್ಯಮಿ ಮಹ್ಮದ್ ಬಿಲಾಲ್ ಹತ್ಯೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಮೀರ್ ಅಲಿಯಾಸ್ ಟಮಾಟ ಸಮೀರನನ್ನ ಹತ್ಯೆ ಮಾಡಲಾಗಿಯೆಂದು ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಹೇಳಿದ್ದಾರೆ. ಸೆ9 ರಂದು ಮಧ್ಯಾನ 3 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಹಣಕಾಸು ಮತ್ತು ರಿಯಲ್ ಎಸ್ಟೇಟ್ ವಿಚಾರಕ್ಕೆ ಸಮೀರ್ ಅಲಿಯಾಸ್ ಟಮಟಾ ಸಮೀರ್ ಮತ್ತು ಮಹ್ಮದ್ ಬಿಲಾಲ್ ಮಧ್ಯೆ ಜಗಳ ನಡೆಯುತ್ತಿತ್ತು. ಜಗಳ ವಿಕೋಪಕ್ಕೆ ಹೋಗಿ ಮಹ್ಮದ್ ಬಿಲಾನನ್ನ ಸಮೀರ್ ಹತ್ಯೆ ಮಾಡಿದ್ದಾನೆಂದು ಪೊಲೀಸ್ ಆಯುಕ್ತ ಡಾ ಶರಣಪ್ಪ ಹೇಳಿದ್ದಾರೆ.