ಜೋಯಿಡಾ : ತಾಲೂಕಿನ ಡೊಣಪ ಅರಣ್ಯ ಪ್ರದೇಶದ ಕಾಳಿ ನದಿ ಹಿನ್ನೀರಿನಲ್ಲಿ ಯಾರೋ ಅಪರಿಚಿತ ಮಹಿಳೆ ಮಲಗಿರುವ ಸ್ಥಿತಿಯಲ್ಲಿರುವ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ, ಜೋಯಿಡಾ ಪಿಎಸ್ಐ ಮಹೇಶ ಮಾಳಿ ಅವರು ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಕ್ಷಣವೇ ತೆರಳಿ ವೃದ್ಧೆಯನ್ನು ರಕ್ಷಣೆ ಮಾಡಿದ ಘಟನೆ ಇಂದು ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ. ಈ ವೃದ್ಧೆಯ ಕುರಿತಂತೆ ಕುಣಬಿ ಸಮುದಾಯದ ಪ್ರಸನ್ನಗೌಡ ಹಾಗೂ ದಯಾನಂದ ಅವರು ಜೊಯಿಡಾ ಪೊಲೀಸರಿಗೆ ಮಾಹಿತಿಯನ್ನು ನೀಡಿದ ಹಿನ್ನಲೆಯಲ್ಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಮತ್ತು ಸಿಪಿಐ ಚಂದ್ರಶೇಖರ ಹರಿಹರ ರವರಿಗೆ ಮಾಹಿತಿ ನೀಡಿ ಅವರ ಮಾರ್ಗದರ್ಶನದಂತೆ ಜೋಯಿಡಾ ಪಿಎಸ್ಐ ಮಹೇಶ ಮಾಳಿ ಅವರ ನೇತೃತ್ವದಲ್ಲಿ ವೃದ್ಧೆಯನ್ನು ರಕ್ಷಣೆ ಮಾಡಲಾಯ್ತು.