ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟರೆ ದೊರೆಯುವ 15 ಲಕ್ಷ ಪರಿಹಾರ ಲಪಟಾಯಿಸಲು ಸಂಚು ರೂಪಿಸಿದ ಪತ್ನಿ ಪತಿಯನ್ನ ಹತ್ಯೆಗೈದು ಹುಲಿ ಕೊಂದಿರುವ ಕಥೆ ಕಟ್ಟಿ ಪೊಲೀಸರನ್ನ ಯಾಮಾರಿಸಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.ಹುಣಸೂರು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಮುನಿಯಪ್ಪ ಮತ್ತು ತಂಡ ನಡೆಸಿದ ಖಡಕ್ ತೆನಿಖೆಯಲ್ಲಿ ಪತ್ನಿಯ ಸಂಚು ಬಯಲಾಗಿದೆ.ಪತಿಯನ್ನ ಹತ್ಯೆಗೈದ ಪತ್ನಿ ಇದೀಗ ಪೊಲೀಸರ ಅತಿಥಿ. ಸಲ್ಲಾಪುರಿ(40) ಪತ್ನಿಯನ್ನೇ ಹತ್ಯೆಗೈದು ಕಥೆ ಕಟ್ಟಿ ಸಿಕ್ಕಿಬಿದ್ದ ಕಿಲಾಡಿ ಪತ್ನಿ.ವೆಂಕಟಸ್ವಾಮಿ ಪತ್ನಿಯ ಕುತಂತ್ರಕ್ಕೆ ಕೊಲೆಯಾದ ದುರ್ದೈವಿ ಪತಿ.ಮಳವಳ್ಳಿ ತಾಲೂಕು ಹಂಪಾಪುರ ಗ್ರಾಮದ ದಂಪತಿ ಸಲ್ಲಾಪುರಿ ಹಾಗೂ ವೆಂಕಟಸ್ವಾಮಿಗೆ ಇಬ್ಬರು ಮಕ್ಕಳಿದ್ದಾರೆ.