ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳ ಕುರಿತಂತೆ ಶಾಸಕ ಜೆ.ಎನ್. ಗಣೇಶ್ ಅವರು ಸೆಪ್ಟೆಂಬರ್ 2,ಮಂಗಳವಾರ ಮಧ್ಯಾಹ್ನ 12:30ಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ್ದಾರೆ.“ಕಷ್ಟದ ಸಮಯದಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಜನರು ನನ್ನನ್ನು ಕೈಹಿಡಿದಿದ್ದಾರೆ. ಎರಡು ಬಾರಿ ಶಾಸಕನನ್ನಾಗಿ ಮಾಡಿದ್ದಾರೆ. ಅದಕ್ಕಾಗಿ ನನಗೆ ಕಂಪ್ಲಿ ಕ್ಷೇತ್ರದ ಮೇಲೆ ವಿಶೇಷ ಒಲವು ಇದೆ.ಸಚಿವ ಸ್ಥಾನಕ್ಕೆ ಅವಕಾಶ ದೊರೆತರೆ ಪ್ರಮಾಣಿಕವಾಗಿ ಕೆಲಸ ಮಾಡುವೆನು. ನನಗೆ ಅಧಿಕಾರ ಮುಖ್ಯವಲ್ಲ. ಕ್ಷೇತ್ರ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಸಾಮಾನ್ಯ ಸೇವಕನಾಗಿ ಶ್ರಮಿಸುತ್ತೇನೆ. ಶಾಸಕರಾಗಿಯೇ ಇರಲಿ ಅಥವಾ ಇಲ್ಲದಿರಲಿ, ಜನಸೇವಕನಾಗಿ ನಾನು ಕ್ಷೇತ್ರದಲ್ಲಿ ಸದಾ ಕಾರ್ಯನಿರ್ವಹಿಸುತ್ತೇನೆ” ಎಂದು ಗಣೇಶ್ ಹೇಳಿದ್ದಾರೆ.