Download Now Banner

This browser does not support the video element.

ದಾಂಡೇಲಿ: ಚೌತಿ & ಈದ್ ಮಿಲಾದ್ ಹಬ್ಬದ ನಿಮಿತ್ತವಾಗಿ ನಗರದಲ್ಲಿ ಪೊಲೀಸರಿಂದ ಪಥ ಸಂಚಲನ

Dandeli, Uttara Kannada | Aug 28, 2025
ದಾಂಡೇಲಿ : ಚೌತಿ ಹಬ್ಬ ಮತ್ತು ಈದ್‌ಮಿಲಾದ್ ಹಬ್ಬದ ನಿಮಿತ್ತವಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಅಹಿತಕರ ಘಟನೆ ಸಂಭವಿಸದಂತೆ ಜನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ದಾಂಡೇಲಿ ನಗರದಲ್ಲಿ ಇಂದು‌ ಗುರುವಾರ ಸಂಜೆ 5 ಗಂಟೆಗೆ ಪಥ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನಗರದ ಸೋಮಾನಿ ವೃತ್ತದಿಂದ ಆರಂಭಗೊಂಡ ಪಥ ಸಂಚಲನಕ್ಕೆ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಚಾಲನೆಯನ್ನು ನೀಡಿದರು. ಪಥ ಸಂಚಲನವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.‌ ಈ ಬಾರಿ ಇದೀಗ ಎರಡನೇ ಬಾರಿ ಪಥ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
Read More News
T & CPrivacy PolicyContact Us