ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕುಪ್ಪೆ ಬಳಿ ವ್ಯಕ್ತಿಯೋರ್ವ ಗಾಂಜಾವನ್ನ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ಖಚಿತ ಪಡಿಸಿಕೊಂಡು, ತಾವರೆಕೆರೆ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು, ಪಂಚರೊಂದಿಗೆ ದಾಳಿ ನಡೆಸಿ ಮಾರಾಟ ಮಾಡುತ್ತಿದವನನ್ನ ವಶಕ್ಕೆ ಪಡೆದು, ಶೋಧನೆ ನಡೆಸಿ 660 ಗ್ರಾಂ ತೂಕದ ಗಾಂಜಾವನ್ನ ಅಮಾನತ್ತು ಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಶನಿವಾರ ಪ್ರಕಟಣೆ ಮೂಲಕ ತಿಳಿಸಲಾಗಿದೆ.