ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ ತಂದೆಯ ವಿರುದ್ಧ ಬಾಲಕಿ ದೂರು ನೀಡಿದ್ದು, ಇಲ್ಲಿನ ಹದಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ ಎಂದು ಮಂಗಳವಾರ ಪೊಲೀದರು ತಿಳಿಸಿದ್ದಾರೆ. ದಾವಣಗೆರೆ ತಾಲ್ಲೂಕಿನ ಗ್ರಾಮವೊಂದರ 17 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ತಂದೆ ಗಣೇಶ್ (54 ವರ್ಷ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ‘ಬಾಲಕಿಯು ಬ್ಯೂಟಿಷಿಯನ್ ತರಬೇತಿಗೆಂದು ಗ್ರಾಮದಿಂದ ದಾವಣಗೆರೆಗೆ ಬರುತ್ತಿದ್ದಳು. ಇದು ತಂದೆಗೆ ಇಷ್ಟವಿರಲಿಲ್ಲ. ಮಗಳ ಬಗ್ಗೆ ಅನುಮಾನ ಹೊಂದಿದ್ದ ತಂದೆಯು, ಮದುವೆಯ ವಯಸ್ಸಾಗದಿದ್ದರೂ ಬಾಲಕಿಗೆ ಸಂಬಂಧಿಕರಲ್ಲೇ ವಿವಾಹ ನಿಶ್ಚಿತಾರ್ಥ ಮಾಡಿಸಿದ್ದ. ಈ ಬಗ್ಗೆ ಬಾಲಕಿ ಹಾಗೂ ಆಕೆಯ ತಾಯಿ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.