ಹೊಸದುರ್ಗ ತಾಲ್ಲೂಕಿನ ಯಾದಘಟ್ಡ ಗ್ರಾಮದಲ್ಲಿ ಕರಡಿ ಹಾಗೂ ಕರಡಿ ಮರಿ ಬಾವಿಗೆ ಬಿದ್ದಿರುವ ಪ್ರಕರಣ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಗ್ರಾಮಸ್ಥರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ಸಹಕಾರದಿಂದ ಬಾವಿಯೊಳಗೆ ಬಲೆ ಹಾಕಿ, ಏಣಿ ಹಾಕಿ ಕರಡಿಯನ್ನ ಮೇಲೆತ್ತಲು ಪ್ರಯತ್ನಿಸಿದರು. ಬಳಿಕ ಮೋಟಾರ್ ಸಹಾಯದಿಂದ ಬಾವಿಯಲ್ಲಿನ ನೀರನ್ನ ಹೊರ ತೆಗೆದು ಕರಡಿಗೆ ಅರವಳಿಕೆ ಮದ್ದು ನೀಡಿ, ರಕ್ಷಣೆ ಮಾಡಲಾಯ್ತು. ಬಾವಿಗೆ ಹೊಂದಿಕೊಂಡಿದ್ದ ಜೇನು ತಿನ್ನಲು ಹೋಗಿದ್ದ ವೇಳೆ ಆಯತಪ್ಪಿ ಬಿದ್ದಿರುವ ಸಾಧ್ಯತೆ ಇದೆ.