ಮಾಲೂರು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಕಾರದ ಸಹಕಾರದಿಂದ ೩ ಬೆಡ್ಗಳಿದ್ದ ಡಯಾಲಿಸಿಸ್ ಕೇಂದ್ರವನ್ನು ೯ ಬೆಡ್ಗಳಿಗೆ ಹೆಚ್ಚುವರಿಯಾಗಿ ಮಾಡಿರುವುದರಿಂದ ಪ್ರತಿನಿತ್ಯ ೭೨ ಮಂದಿ ಡಯಾಲಿಸಿಸ್ ರೋಗಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರದಿಂದ ಉಚಿತ ೯ ಬೆಡ್ಗಳ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೌಲಭ್ಯ ಪಡೆಯವರಿಗೆ ೩ ಬೆಡ್ಗಳು ಮಾತ್ರ ಇದ್ದಿದ್ದರಿಂದ ಡಯಾಲಿಸಿಸ್ ರೋಗಿಗಳು ಹೆಚ್ಚುವರಿಯಾಗಿ ಬೆಡ್ಗಳನ್ನು ಹಾ