ಹೊನ್ನಾವರ 110 ಕೆ.ವಿ ವಿದ್ಯುತ್ ವಿತರಣಾ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದ ತುರ್ತು ನಿರ್ವಹಣೆ ಕೆಲಸವಿರುವದರಿಂದ ಪಟ್ಟಣ ಶಾಖೆಯ ಎಲ್.ಐ ಸಿ ಹಾಗೂ ಹೊನ್ನಾವರ ತಾಲೂಕಿನ ಗೇರುಸೊಪ್ಪ ಶಾಖಾ ವ್ಯಾಪ್ತಿಯ ಮಾಗೋಡ, ಉಪ್ಪೋಣಿ, ಬಲ, ಎಡ ಹಾಗೂ ಕಾಲೋನಿ ಫೀಡರುಗಳ ವ್ಯಾಪ್ತಿಗಳಲ್ಲಿ ಹಾಗೂ 33 ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರ ಕಾಸರಕೋಡ ವ್ಯಾಪ್ತಿಯ ಟೊಂಕ, ಬಳಕೂರು, ಕೆಳಗಿನೂರು, ದೇವರಗದ್ದೆ ಫೀಡರುಗಳ ವ್ಯಾಪ್ತಿಗಳಲ್ಲಿ ಸೆ.3 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಮಂಗಳವಾರ ಸಂಜೆ 6.30ಕ್ಕೆ ಮಾಹಿತಿ ನೀಡಿದೆ.