ಕಲಬುರಗಿ : ಕಲಬುರಗಿ ತಾಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿ ತಂದೆಯಿಂದಲೇ ಮಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಗಳನ್ನ ಕೊಲೆ ಮಾಡಿದ ಬಳಿಕ ಸಾಕ್ಷಿ ನಾಶಪಡಿಸಿದ ಹಿನ್ನಲೆಯಲ್ಲಿ, ಫರಹತ್ತಬಾದ್ ಠಾಣೆ ಪೊಲೀಸರು ಸುಮೋಟೋ ಕೆಸ್ ದಾಖಲಿಸಿಕೊಂಡು ತಂದೆಯನ್ನ ಬಂಧಿಸಿ ತನಿಖೆ ನಡೆಸಲಾಗ್ತಿದೆಯೆಂದು ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಹೇಳಿದ್ದಾರೆ. ಆ30 ರಂದು ಮಧ್ಯಾನ 12 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಶಂಕರ್ ತನ್ನ ಮಗಳನ್ನ ಹತ್ಯೆ ಮಾಡಿದ್ದು, ಬಳಿಕ ಶವ ಸುಟ್ಟು ಹಾಕಿದ್ದಾನೆ.. ಕೃತ್ಯಕ್ಕೆ ಸಹಕರಿಸಿದ ಮೃತ ಕವಿತಾಳ ಸಹೋದರ ಸಂಬಂಧಿ ಶರಣಪ್ಪ ಮತ್ತು ದತ್ತಪ್ಪ ಎಂಬಾತರನ್ನ ಸಹ ಬಂಧಿಸಲು ಬಲೆ ಬೀಸಲಾಗುದೆಯೆಂದು ಡಾ ಶರಣಪ್ಪ ಹೇಳಿದ್ದಾರೆ