ಹಾಸನ: ರೈತರಿಂದ ಚಂಡು ಹೂ ಖರೀದಿ ಮಾಡಿದರೂ ಪಾವತಿ ನೀಡದೇ ಕಂಪನಿ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಂಪನಿ ಮುಂದೆ ಗುರುವಾರದಿಂದ ಅನಿರ್ಧಿಷ್ಟವಧಿ ಹೋರಾಟ ಆರಂಭಿಸಿದ್ದಾರೆ.ನಗರದ ಹೊರ ವಲಯ ಕೈಗಾರಿಕ ಪ್ರದೇಶ ಹೊಳೆನರಸೀಪುರ ರಸ್ತೆ ಬಳಿ ಇರುವ ಓಮ್ಮಿ ಆಕ್ಟಿವ್ ಹೆಲ್ತ್ ಟೆಕ್ನಾಲಜೀಸ್ ಲಿಮಿಟೆಡ್ ಕಂಪನಿ ಮುಂದೆ ಸುಮಾರು ೨೦೦ ಜನ ವ್ಯಾಪಾರ ಮಾಡುವ ರೈತರು ಜಮಾಯಿಸಿ ನ್ಯಾಯಾ ಕೇಳಿ ಪ್ರತಿಭಟಿಸಿದರು. ಇದೆ ವೇಳೆ ಹರಪನಹಳ್ಳಿಯ ಕುಭೇರಪ್ಪ ಇತರರು ಮಾಧ್ಯಮದೊಂದಿಗೆ ಮಾತನಾಡಿ, ರೈತರಿಂದ ಬೀಜ ಪಡೆದು ಬೆಳೆದ ಹೂವನ್ನು ಹಾಸನ ಕೈಗಾರಿಕಾ ಪ್ರದೇಶದಲ್ಲಿರುವ ಓಮ್ಮಿ ಆಕ್ಟಿವ್ ಹೆಲ್ತ್ ಟೆಕ್ನಾಲಜೀಸ್ ಲಿಮಿಟೆಡ್ ಖರೀದಿಸುತ್ತಿದ್ದು, ಈಗಾಗಲೇ ಭಾಗಶಃ ಹೂ