ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯಾಗುವ ಮೂಲಕ ಮಾದಿಗ ಸಮುದಾಯದ ಸುದೀರ್ಘ ಮೂರು ದಶಕಗಳ ಹೋರಾಟಕ್ಕೆ ಫಲ ಸಿಕ್ಕ ಹಿನ್ನೆಲೆ ಸೆ.8 ರ ಸೋಮವಾರ ಮಧ್ಯಾಹ್ನ 1 ಗಂಟೆಗೆ ರಾಯಚೂರು ನಗರದಲ್ಲಿ ಸಮುದಾಯದ ಬಂಧುಗಳು ವಿಜಯೋತ್ಸವ ಆಚರಣೆ ಮಾಡಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಸೇರಿ ವಿವಿಧ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಿದರು. ಒಳಮೀಸಲಾತಿ ಜಾರಿಗಾಗಿ ಶ್ರಮಿಸಿದ ಹಲವಾರು ಹೋರಾಟಗಾರರ, ಮುಖಂಡರ ಸಂಘಟನೆಗಳ ಶ್ರಮ ಮತ್ತು ಪ್ರಾಣತ್ಯಾಗವನ್ನು ಸ್ಮರಣೆ ಮಾಡಿದರು. ಕಾಂಗ್ರೆಸ್ ಸರ್ಕಾರದಿಂದ ಒಳಮೀಸಲಾತಿ ಜಾರಿಯಾಗಲು ಶ್ರಮಿಸಿದ, ಇಡೀ ರಾಜ್ಯ ಸಂಚಾರ ಮಾಡಿ ಸಮುದಾಯದಲ್ಲಿ ಸಮೀಕ್ಷೆ ಜಾಗೃತಿ ಮೂಡಿಸಿದ ಮಾಜಿ ಸಚಿವ ಹೆಚ್.ಆಂಜನೇಯ ಅವರಿಗೆ ಜೈಕಾರ ಹಾಕಿದರು. ವಿ