ಮಳವಳ್ಳಿ : ವೇಗವಾಗಿ ಬರುತ್ತಿದ್ದ ಗೂಡ್ಸ್ ಟೆಂಪೋ ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಎರಡು ವಿದ್ಯುತ್ ಕಂಬಗಳು ತುಂಡು ತುಂಡಾಗಿರುವುದರ ಜೊತೆಗೆ ವಿದ್ಯುತ್ ಮಾರ್ಗದ ತಂತಿಗಳು ಸಹ ಛಿದ್ರವಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ಜರುಗಿದೆ. ಭಾನುವಾರ ಮುಂಜಾನೆ 6 ಗಂಟೆ ಸಮಯದಲ್ಲಿ ಈ ಘಟನೆ ಜರುಗಿದ್ದು ಕಿರುಗಾವಲು ನಿಂದ ಟಿ ನರಸೀಪುರ ಕಡೆಗೆ ಹೊರಟಿದ್ದ ಗೂಡ್ಸ್ ಟೆಂಪೋ ಕಲ್ಕುಣಿ ಗ್ರಾಮದ ಬಳಿ ಅತೀ ವೇಗದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಎರಡು ವಿದ್ಯುತ್ ಕಂಬಗ ಳಿಗೆ ಡಿಕ್ಕಿ ಹೊಡೆದ ರಭಸಕ್ಕೆ ಎರಡು ಕಂಬಗಳು ತುಂಡು ತುಂಡಾಗಿ ಮುರಿದು ಬಿದ್ದಿದ್ದು ಜೊತೆಗೆ ಈ ಮಾರ್ಗದ ವಿದ್ಯುತ್ ತಂತಿಗಳು ತಂಡಾಗಿವೆ ಎಂದು ವರದಿಯಾಗಿದೆ.