ಹನೂರು: ಪಟ್ಟಣದ ಪೌರಕಾರ್ಮಿಕ ಕಾಲೋನಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ವಿವಾಹವನ್ನು ತಡೆಯುವಲ್ಲಿ ಮಕ್ಕಳ ರಕ್ಷಣಾ ಜಿಲ್ಲಾ ಘಟಕದ ತಂಡ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯನ್ನು ಘಟಕದ ಸಂಯೋಜಕ ಮಹೇಶ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಗುಂಡ್ಲುಪೇಟೆ ಪಟ್ಟಣದ ವಿನೋದ್ ಎಂಬಾತನಿಗೆ, ಹನೂರಿನ 2ನೇ ವಾರ್ಡಿನ ಅಪ್ರಾಪ್ತೆಯೊಂದಿಗೆ ಆಗಸ್ಟ್ 29ರಂದು ತಮಿಳುನಾಡಿನ ಬಣ್ಣಾರಿ ದೇವಾಲಯದಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ವಿವಾಹಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದರೂ, ಸಾರ್ವಜನಿಕರೊಬ್ಬರು 1098 ಮಕ್ಕಳ ಸಹಾಯವಾಣಿ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡಿದ ಪರಿಣಾಮ, ಘಟಕದ ಸಿಬ್ಬಂದಿ ಬಾಲಕಿಯ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.