ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢ ರಾಗಿದ್ದರೆ ಮಾತ್ರ ಮುಂದೆ ದೇಶವನ್ನು ಮುನ್ನಡೆಸಿ ಕೊಂಡು ಹೋಗಲು ಸಾಧ್ಯ. ಚಿಕ್ಕವಯಸ್ಸಿನಿಂದಲೇ ಅವರಿಗೆ ಪೋಷಕರು ಸರಿಯಾದ ರೀತಿಯಲ್ಲಿ ಪೌಷ್ಟಿಕ ಆಹಾರವನ್ನು ನೀಡಬೇಕು ಎಂದು ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಮುಜಾಫರ್‌ಎ ಮಂಜರಿ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕುಕಾನೂನುಸೇವಾಸಮಿತಿ, ವಕೀಲರಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪೌಷ್ಟಿಕಾಂಶ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳು ಮಾನವ ಕುಲಕ್ಕೆ ದೇವರುನೀಡಿದ ಅತ್ಯಂತದೊಡ್ಡಕೊಡುಗೆಯಾ ಗಿದ್ದು, ಮಕ್ಕಳಿದ್ದರೆ ಮಾತ್ರ ಮಾನವ ಕುಲದ ಅಸ್ಥಿತ್ವ ಎಂದ್ರು