ಕೋಲಾರದ ಮಾಲೂರು ತಾಲ್ಲೂಕಿನಲ್ಲಿ ಅಪರೂಪದಲ್ಲೇ ಅಪರೂಪ ಅನ್ನುವಂತಹ ಮದುವೆ ನಡೆದಿದೆ. ಅಂತರ್ಧರ್ಮೀಯ ವಿವಾಹಗಳು ಸಾಮಾನ್ಯ. ಆದರೆ ಇಬ್ಬರು ಅಂಧರು ಮದುವೆಯಾಗೋದು ಸಾಮಾನ್ಯವಲ್ಲ. ಇದೀಗ ಇಬ್ಬರು ಅಂಧರು ಸತಿಪತಿಗಳಾಗೋ ಮೂಲಕ ಕತ್ತಲಿದ್ದ ತಮ್ಮ ಬಾಳಲ್ಲಿ ಹೊಸ ಬೆಳಕು ಮೂಡಿಸಿಕೊಂಡಿದ್ದಾರೆ. ತಾಲ್ಲೂಕಿನ ದೊಡ್ಡಕಲ್ಲಹಳ್ಳಿ ಗ್ರಾಮದಲ್ಲಿ ನಡೆದ ವಿಶೇಷ ಮದುವೆ ಇದಾಗಿದ್ದು, ಅದೆಷ್ಟೋ ಕಣ್ಣುಗಳನ್ನು ತೇವಗೊಳಿಸಿದವು.ಹುಟ್ಟಿನಿಂದಲೇ ಕಣ್ಣು ಕಾಣದಿದ್ದರೂ ಹೃದಯದಲ್ಲಿ ಸಾವಿರ ಕನಸು ಹೊತ್ತಿದ್ದ ನಾರಾಯಣಮ್ಮ, ರಾಯಚೂರು ಜಿಲ್ಲೆಯ ಯರಮರಸ್ ಭಾನುವಾರ ಗ್ರಾಮದ ರಂಗಪ್ಪನ ಕೈ ಹಿಡಿದು ಜೀವನದ ಹೊಸ ಪಯಣ ಆರಂಭಿಸಿದ ಕ್ಷಣ ಅದ್ಭುತವಾಗಿತ್ತು ಸದ್ಯ ವೀಡಿಯೋ ಭಾನುವಾರದಿಂದವೈರಲ್ ಆಗಿದೆ