ಕಳೆದ ಮೂರ್ನಾಲ್ಕು ದಿನಗಳಿಂದ ಶಿವಮೊಗ್ಗ ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಯೊಂದು ಕುಸಿದು ಬಿದ್ದಿರುವ ಘಟನೆ ಶಿವಮೊಗ್ಗ ನಗರದ ವಾರ್ಡ್ ನಂಬರ್ 26ರ ನೇತಾಜಿ ಸರ್ಕಲ್ ಬಳಿ ಶನಿವಾರ ನಡೆದಿದೆ. ಮಂಜುನಾಥ್ ಹಾಗೂ ಆಶಾ ಎಂಬುವರಿಗೆ ಸೇರಿದ ಮನೆ ಕುಸಿದ ವಿಷಯ ತಿಳಿದ ಕೂಡಲೇ ಶಾಸಕ ಚನ್ನಬಸಪ್ಪ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಕೂಡಲೇ ಅಗತ್ಯ ನೆರವು ಒದಗಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.