ಸಂಘದ ಹಣವನ್ನು ಕಟ್ಟಲು ದುಡ್ಡು ತೆಗೆಯಿಸಿಕೊಂಡು ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದ ವ್ಯಕ್ತಿ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾನೆ. ರಟ್ಟಿಹಳ್ಳಿ ತಾಲೂಕು ತೋಟಗಂಟಿ ಗ್ರಾಮದ ಜಬಿವುಲ್ಲಾ ಹರಿಹರ (44) ಕಾಣೆಯಾದ ವ್ಯಕ್ತಿ. ಈತ ಯಾವುದೋ ವಿಚಾರ ಮನಸ್ಸಿಗೆ ಹಚ್ಚಿಕೊಂಡು ಮನೆ ಬಿಟ್ಟು ಹೋಗಿದ್ದಾನೆ ಎಂದು ಆತನ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.