ಹೆತ್ತ ಇಬ್ಬರು ಮಕ್ಕಳನ್ನು ಕೊಡಲಿಯಿಂದ ಪಾಪಿ ತಂದೆ ಒಬ್ಬ ಕೊಚ್ಚಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ. ಗುರುವಾರ ಬೆಳಗಿನ ಜಾವ ಪತ್ನಿ ಬಹಿರ್ದೇಶೆಗೆ ಹೋದ ಸಂದರ್ಭದಲ್ಲಿ ಕೊಡಲಿ ತೆಗೆದುಕೊಂಡ ಶರಣಪ್ಪ ತನ್ನ ಇಬ್ಬರು ಮಕ್ಕಳಾದ ಐದು ವರ್ಷದ ಸಾನ್ವಿ 2 ವರ್ಷದ ಭಾರ್ಗವ್ ಎನ್ನುವ ಮಕ್ಕಳನ್ನು ಕೊಂದಿದ್ದಾನೆ,ಮತ್ತೊಬ್ಬ ಮಗ 8 ವರ್ಷದ ಹೇಮಂತನನ್ನು ಕೊಲೆ ಮಾಡಲು ಹೋದಾಗ ತಪ್ಪಿಸಿಕೊಂಡು ಓಡಿ ಹೋಗಿದ್ದು,ಗಾಯಗೊಂಡಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದ್ದು,ಸದ್ಯ ಆರೋಪಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಸ್ಥಳಕ್ಕೆ ಎಸ್‌ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.