ಇಲ್ಲಿನ ವಂದೇ ಮಾತರಂ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ರಾಣೇಬೆನ್ನೂರು ಕಾ ರಾಜಾ ಗಣಪತಿಯ (ಶತಮಾನದ ಸಂಘ ಸೂರ್ಯ ಮಾದರಿ) ಶೋಭಾಯಾತ್ರೆ ಶನಿವಾರ ನಗರದಲ್ಲಿ ವೈಭವಪೂರಿತವಾಗಿ ಜರುಗಿತು. ಸ್ಥಳೀಯ ನಗರಸಭಾ ಕ್ರೀಡಾಂಗಣದ ಬಳಿ ಬೆಳಗ್ಗೆ 11.30 ಸುಮಾರಿಗೆ ಶೋಭಾಯಾತ್ರೆ ಪ್ರಾರಂಭವಾಯಿತು. ನಂತರ ಹಳೇ ಪಿ.ಬಿ.ರಸ್ತೆ, ಸಾಲೇಶ್ವರ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ, ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಎಂ.ಜಿ.ರಸ್ತೆ, ಚತುರ್ಮುಖಿ ದೇವಸ್ಥಾನ, ದೊಡ್ಡಪೇಟೆ ರಸ್ತೆ, ಸುಭಾಸ ಚೌಕ್.. ಬಸವೇಶ್ವರ ದೇವಸ್ಥಾನ, ಕುಂಬಾರ ಓಣಿ, ಓಂ ಸರ್ಕಲ್, ಸಂಗಮ್ ಸರ್ಕಲ್, ಪೋಸ್ಟ್ ಸರ್ಕಲ್, ಮೆಸ್ಸೇರಿ ಕಾಸ್, ಬಸ್ ನಿಲ್ದಾಣ ಮಾರ್ಗವಾಗಿ ಹರಿಹರ ರಸ್ತೆಯ ಎನ್.ವಿ. ಹೊಟೇಲ್‌ವರೆಗೆ ಸಾಗಿ ಶೋಭಾಯಾತ್ರೆ ಕೊನೆಗೊಂಡಿತು.