ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಮತ್ತೆ ಓಡಾಟ ನಡೆಸುತ್ತಿದ್ದು ಆಟೋ ಚಾಲಕರು ಆಕ್ರೋಶ ಹೊರಹಾಕುತ್ತಿದ್ದಾರೆ. ನಗರದ ಹಲವಡೆ ನೈತಿಕ ಪೊಲೀಸ್ ಗಿರಿ ಪ್ರದರ್ಶನ ಮಾಡುತ್ತಿದ್ದು ಅಂತಹದ್ದೇ ಒಂದು ಪ್ರಕರಣ ಕೋರಮಂಗಲದಲ್ಲಿ ದಾಖಲಾಗಿದೆ. ಆಗಸ್ಟ್ 25 ಸಂಜೆ 7 ಗಂಟೆಗೆ ಬೈಕ್ ಟ್ಯಾಕ್ಸಿ ಚಾಲಕನ ಹಿಡಿದು ಅವಾಚ್ಯ ಪದಗಳಿಂದ ನಿಂದಿಸಿ ಹಿಗ್ಗ ಮುಖ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಎಲ್ಲರೂ ರೈಡ್ ಮಾಡಿ ಅಂತ ಕರೆ ಕೂಡ ಕೊಟ್ಟಿದ್ದಾರೆ. ಈ ರೀತಿ ಗೂಂಡಾ ವರ್ತನೆ ತೋರುವ ಕೆಲ ಆಟೋ ಚಾಲಕರಿಗೆ ಕಡಿವಾಣ ಹಾಕಬೇಕಿದೆ