ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಮಾರ್ಕೋಟಿನ್ ಅಂಶವುಳ್ಳ ಗುಳಿಗೆ ಮತ್ತು ಸಿರಪ್ ಇಟ್ಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ನಗರದ ದೀನ್ ದಯಾಳ್ ನಗರ ವ್ಯಾಪ್ತಿ ಅಂಗಡಿ ಮೇಲೆ ಮಾರ್ಕೆಟ್ ಪೊಲೀಸರು ಶುಕ್ರವಾರ ದಾಳಿ ನಡೆಸಿ ಲಕ್ಷಕ್ಕೂ ಅಧಿಕ ಮೌಲ್ಯದ ನಶೆ ಬರುವ ಗುಳಿಗೆ, ಸಿರಪ್ ವಶಕ್ಕೆ ಪಡೆದು ಆರೋಪಿತರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಶುಕ್ರವಾರ ಸಂಜೆ 5ಕ್ಕೆ ತಿಳಿಸಿದರು.