ನಗರ ಹೊರ ವಲಯದಲ್ಲಿ ಬೀಡು ಬಿಟ್ಟಿದ್ದ ಬಿಡಾಡಿ ದನಗಳನ್ನು ಲಾರಿಗಳಲ್ಲಿ ಹೊತ್ತೊಯ್ದು ಬೇರೆ ಕಡೆಗೆ ಸಾಗಾಟ ಮಾಡಲಾಗುತ್ತಿದೆ ಎಂದು ಯಕ್ಲಾಸಪುರ ಗ್ರಾಮದ ನಿವಾಸಿಗಳು ಆರೋಪಿಸಿದ್ದಾರೆ. ಸೆಪ್ಟೆಂಬರ್ 12ರ ಶುಕ್ರವಾರ ತಡರಾತ್ರಿ ಮಾಹಿತಿ ನೀಡಿದ ಯಕ್ಲಾಸಪುರ ಗ್ರಾಮದ ನಿವಾಸಿಗಳು, ದುಷ್ಕರ್ಮಿಗಳು ಲಾರಿಗಳಲ್ಲಿ ತುಂಬಿಕೊಂಡು ಬೇರೆ ಕಡೆಗೆ ಸಾಗಿಸುತ್ತಿದ್ದಾರೆ. ಕೂಡಲೇ ಅವರನ್ನ ಬಂಧಿಸಿ ಕರೆದೊಯ್ಯಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ದುಷ್ಕರ್ಮಿಗಳು ನಮ್ಮನ್ನ ಕೂಲಿ ಕೆಲಸ ಮಾಡಲು ಕರೆಯಿಸಿ ಬಿಡಾಡಿ ದನಗಳನ್ನು ತುಂಬಿ ಸಾಗಿಸುವಂತೆ ರಾಯಚೂರಿನ ಬಾಬಾಖಾನ್ ಎಂಬುವವರು ತಿಳಿಸಿದ್ದಾರೆ ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.