ಧರ್ಮಸ್ಥಳದ ವಿಷಯವನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನ ನಡೆಸಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಆರೋಪಿಸಿದರು. ನವಲಗುಂದದಲ್ಲಿ ಶನಿವಾರ ಮದ್ಯಾಹ್ನ 3 ಗಂಟೆಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೋರ್ಟ್ ಹೇಳಿದಂತೆ ಎಸ್ ಐ ಟಿ ತನಿಖೆ ನಡೆಸಲಾಗುತ್ತಿದೆ. ಎರಡು ಮೂರು ವಾರಗಳಿಂದ ಹೆಣಗಳು ಸಿಕ್ಕಿಲ್ಲ, ಸರಕಾರ ಕಾನೂನಾತ್ಮಕವಾಗಿ ಕೆಲಸ ಮಾಡುತ್ತಿದೆ. ಕಾನೂನು ಏನು ಹೇಳುತ್ತದೆ ಅದನ್ನು ಸರಕಾರ ಮಾಡುತ್ತಿದೆ.