ಕೋಟೆನಾಡು ಚಿತ್ರದುರ್ಗದಲ್ಲಿ ಅಬ್ಬಕ್ಕ ರಾಣಿ ಅವರ ರಥಯಾತ್ರೆಗೆ ಚಾಲನೆ ನೀಡಲಾಯಿತು. ಎಬಿವಿಪಿ ಕರ್ನಾಟಕ ದಕ್ಷಿಣ ಇವರ ವತಿಯಿಂದ ನಡೆಯುತ್ತಿರುವ ಅಭಯರಾಣಿ ಅಬ್ಬಕ್ಕ ಅವರ 500 ನೇ ಜನ್ಮ ದಿನಾಚರಣೆ ಹಿನ್ನೆಲೆ ಅಬ್ಬಕ್ಕ ರಥಯಾತ್ರೆಯು ಚಿತ್ರದುರ್ಗಕ್ಕೆ ಆಗಮಿಸಿದ್ದು ಚಿತ್ರದುರ್ಗದ ಕೋಟೆ ಮುಂಬಾಗ ರಥಯಾತ್ರೆಯನ್ನ ಬರಮಾಡಿಕೊಂಡಿದ್ದು ನಗರದಲ್ಲಿ ರಥಯಾತ್ರೆ ಹಮ್ಮಿಕೊಂಡಿದ್ದು ಚಾಲನೆ ನೀಡಲಾಯಿತು. ಇನ್ನೂ ಮಾದಾರ ಚನ್ನಯ್ಯ ಗುರುಪೀಠದ ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಆಗಮಿಸಿ ಅಬ್ಬಕ್ಕ ರಥಯಾತ್ರೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು