ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದ ಯುವಕನೋರ್ವ ವಾಪಾಸ್ ಮನೆಗೆ ಬಾರದೆ ಎಲ್ಲಿಗೋ ಹೋಗಿ ಕಾಣೆಯಾದ ಘಟನೆ ಸ್ಥಳೀಯ ನಾಗೇಂದ್ರನಮಟ್ಟಿಯಲ್ಲಿ ನಡೆದಿದೆ. ಮಹಮ್ಮದ್ ಶಕೀಲ್ ರಜಾಕ್ ಸಾಬ್ ಉಸ್ಮಾನಖಾನವರ (18) ಕಾಣೆಯಾದ ಯುವಕ. ಹಾವೇರಿಯ ಬಸವೇಶ್ವರ ನಗರದಲ್ಲಿರುವ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಿದ್ದನೆಂದು ಎಫ್ಐಆರ್ ನಲ್ಲಿ ತಿಳಿಸಿದೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.