ಸರ್ಕಾರಿ ಪಿಂಚಣಿಗಾರರಿಗೆ ಮಾರಕವಾಗಿರುವ ಕೇಂದ್ರ ಸರ್ಕಾರದ ಫೈನಾನ್ಸ್ ಕೋಡ್ ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿ ವಿಜಯಪುರ ನಗರದ ನೌಕರರ ಭವನದಲ್ಲಿ ಶನಿವಾರ ಸಾಯಂಕಾಲ 5ಗಂಟೆ ಸುಮಾರಿಗೆ ಪಿಂಚಣಿದಾರರ ಸಂಘದಿಂದ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಯಿತು. ಕೇಂದ್ರ ಸರ್ಕಾರದ ಫೈನಾನ್ಸ್ ಬಿಲ್ಲನ್ನು ಕೂಡಲೆ ಸರ್ಕಾರ ಹಿಂಪಡೆಯಬೇಕು ಇದರಿಂದ ಲಕ್ಷಾಂತರ ಜನ ಪಿಂಚಣಿ ದಾರಿಗೆ ತೊಂದರೆಯಾಗುತ್ತದೆ ಇದರ ಕುರಿತು ಬೃಹತ್ ಪ್ರತಿಭಟನೆ ಮಾಡುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಂಡರು.