ಮೈಸೂರಿನ ಎಚ್ ಡಿ ಕೋಟೆಯ ಅಂತರಸಂತೆ ವನ್ಯಜೀವಿ ವಲಯ ಸುಂಕದಕಟ್ಟೆ ಶಾಖೆಯಲ್ಲಿ ಅರಣ್ಯ ಪಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊರಗುತ್ತಿಗೆ ಕಳ್ಳ ಬೇಟೆ ತಡೆ ಶಿಬಿರ ಕಾವಲುಗಾರನಾದ ಮಾದ ಎಂಬುವನ ಮೇಲೆ ಹಸಿಹಿಂಡಲಕಡ ಟ್ರಾನ್ಜ್ಯಾಕ್ಸ್ ಲೈನ್ ಅರಣ್ಯ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ವೇಳೆ ಕರಡಿಯೊಂದು ಏಕಾಏಕಿ ದಾಳಿ ಮಾಡಿ ತಲೆ ಮತ್ತು ಮುಖದ ಭಾಗವನ್ನು ತೀವ್ರವಾಗಿ ಗಾಯಗೊಳಿಸಿದ್ದು ತಕ್ಷಣವೇ ಮಾದ ಅವರ ಸಹಪಾಠಿಗಳೆಲ್ಲ ಸೇರಿ ರಕ್ಷಿಸಿ ತಮ್ಮ ಇಲಾಖೆ ವಾಹನದಲ್ಲೇ ಅರಣ್ಯ ಪ್ರದೇಶದಿಂದ ಸುಂಕದಕಟ್ಟೆ ಗೇಟ್ ವರೆಗೂ ತಂದು ನಂತರ ಖಾಸಗಿ ಹಂಬುಲೆನ್ಸ್ ಮುಖಾಂತರವಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ ಕರಡಿ ದಾಳಿಗೆ ಒಳಗಾದ ಮಾದ ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.