*ಕೇಬಲ್ ಕಳ್ಳತನ ಭೇದಿಸುವಲ್ಲಿ ಯಶಸ್ವಿಯಾದ ಮೊಳಕಾಲ್ಮೂರು ಪೊಲೀಸರು* ಮೊಳಕಾಲ್ಮುರು:ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಕೇಬಲ್ ಕಳವು ಪ್ರಕರಣಗಳನ್ನು ಬೇಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದು ಮಾಲು ಸಮೇತ ಕಳ್ಳರನ್ನು ಸೆರೆ ಹಿಡಿದಿದ್ದಾರೆ. ತಾಲೂಕಿನಲ್ಲಿ ಕಾಪರ್ ಹಾಗೂ ಅಲ್ಯೂಮಿನಿಯಂ ಡ್ರೇಕ್ ಕೇಬಲ್ ಕಳವು ಪ್ರಕರಣಗಳು ನಡೆದಿದ್ದು ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನವರನ್ನು ಬಂಧಿಸಲಾಗಿದೆ.