ರಾಯಚೂರು ನಗರದಲ್ಲಿ ಜಿಲ್ಲಾ ಆಡಳಿತ ಮತ್ತು ಎಂ ಎಂ ಜೋಶಿ ಆಸ್ಪತ್ರೆ ವತಿಯಿಂದ ನೇತ್ರದಾನದ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ಸೋಮವಾರ ಮಧ್ಯಾಹ್ನ ನಡೆದ ಜಾಗೃತಿ ಜಾಥಾಕ್ಕೆ ಕಿಲ್ಲೆಬ್ರಹ್ಮಠದ ಶ್ರೀಗಳು ಭಾಗವಹಿಸಿ ಚಾಲನೆ ನೀಡಿ ಮಾತನಾಡಿ, ಎಲ್ಲರೂ ಅಂಗಾಂಗ ದಾನಗಳನ್ನು ಮಾಡುವ ಮೂಲಕ ಬದುಕಿನಲ್ಲಿ ಸಾರ್ಥಕತೆ ಹೊಂದಬಹುದು ಎಂದು ತಿಳಿಸಿದರು. ನಗರದ ಅಂಬೇಡ್ಕರ್ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ಎಂ ಎಂ ಜೋಶಿ ಆಸ್ಪತ್ರೆ ಅವರಿಗೆ ಜಾಥಾ ನಡೆಯಿತು. ಈ ಸಂದರ್ಭದಲ್ಲಿ ಎಂ ಎಂ ಜೋಶಿ ಆಸ್ಪತ್ರೆಯ ಮುಖ್ಯಸ್ಥರು ವೈದ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.