ಮದ್ದೂರು ತಾಲ್ಲೂಕು ಭಾರತೀನಗರದ ಹಲಗೂರು ರಸ್ತೆಯ ಸವಿತ ಸಮಾಜದ ಕಛೇರಿಯಲ್ಲಿ ಸವಿತ ಸಮಾಜದ ಸಿ.ಎ.ಕೆರೆ ಹೋಬಳಿ ಘಟಕದ ವತಿಯಿಂದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ನಡೆಯಿತು. ಸವಿತ ಸಮಾಜದ ಪದಾಧಿಕಾರಿಗಳು ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸವಿತ ಸಮಾಜದ ತಾಲ್ಲೂಕು ಅಧ್ಯಕ್ಷ ರಾಮಲಿಂಗಯ್ಯ ಅವರು ಮಾತನಾಡಿ, ಸವಿತ ಸಮಾಜದ ಜನಾಂಗವನ್ನು ಸರ್ಕಾರ ಅಭಿವೃದ್ದಿ ಪಡಿಸುವ ಜೊತೆಗೆ ಮೂಲಸೌಲಭ್ಯ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕೆಂದು ತಿಳಿಸಿದರು. ನಮ್ಮ ಕುಲಕಸುಬಾದ ಡೋಲು ಮತ್ತು ನಾದಸ್ವರ ವಾದಕರಿಗೆ ಉಚಿತ ತರಬೇತಿ ಶಿಕ್ಷಣವನ್ನು ನೀಡಬೇಕು. ಜೊತೆಗೆ ಜಿಲ್ಲೆಗೊಂದು