ತುಮಕೂರು ಜಿಲ್ಲೆಯ ನಾಲೆಗಳ ಸಾಮರ್ಥ್ಯ ಅಧಿಕವಾಗಿದ್ದರು ಹೇಮಾವತಿ ನೀರು ಕಡಿಮೆ ಪ್ರಮಾಣದಲ್ಲಿ ಹರಿಸಲಾಗುತ್ತಿದೆ. ಇದಕ್ಕೆ ಬೇಜವಾಬ್ದಾರಿ ಅಧಿಕಾರಿಗಳೇ ನಡೆ ಕಾರಣವಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪ ಮಾಡಿದರು. ತುಮಕೂರು ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಶುಕ್ರವಾರ ಬೆಳಿಗ್ಗೆ 10.30 ರ ಸಮಯದಲ್ಲಿ ಮಾತನಾಡಿದರು. ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಯಿಂದಾಗಿ, ನಾಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಇದೆ ಪ್ರಮಾಣದಲ್ಲಿ ನೀರು ಹರಿಸಿದರೆ ಕೆರೆ, ಕತ್ತೆಗಳು ತುಂಬಲು ಸಾಧ್ಯವಿಲ್ಲ ರೈತರು 1 ಎಕರೆ ಯಷ್ಟು ಕೃಷಿ ಮಾಡಲು ಅಸಾಧ್ಯವಾಗಲಿದೆ. ರಾಜಕಾರಣಿಗಳ ಹಾಗೂ ಅಧಿಕಾರಿಗಳ ಇಚ್ಛಾ ಶಕ್ತಿ ಕೊರತೆ ಎಂದು ದೂರಿದರು.