ಮಧ್ಯ ಕರ್ನಾಟಕದ ಹೆಬ್ಬಾಗಿಲು ಕೋಟೆನಾಡು ಚಿತ್ರದುರ್ಗ ಗೌರಿಸುತ ಗಣಪನ ಹಬ್ಬಕ್ಕೆ ರೆಡಿಯಾಗಿದೆ. ಇನ್ನೇನು ಒಂದೇ ಒಂದು ದಿನ ಕಳೆದ್ರೆ ಎಲ್ಲರ ಮನೆ ಮನಗಳಲ್ಲಿ ಗಣೇಶ ಹಬ್ಬ. ಯುವಕರು ಹಳ್ಳಿ, ಸಿಟಿ ಎನ್ನದೆ ಗಲ್ಲಿ ಗಲ್ಲಿಗಳಲ್ಲೂ ಗಣಪತಿ ಬಪ್ಪಾ ಮೋರೆಯಾ ಅಂತ ಜೈಕಾರ ಹಾಕೋಕೆ ಸಿದ್ದತೆ ನಡೆಸಿದ್ದಾರೆ. ಆದ್ರೇ ಸರ್ಕಾರ ಎಲ್ಲೂ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪತಿ ನಿಷೇಧ ಏರಿದಿ ಇದ್ರಿಂದ ಚಿತ್ರದುರ್ಗ ಜಿಲ್ಲಾಡಳಿತ POP ಗಣಪತಿ ತಯಾರಿಕೆಗೆ ಬ್ರೇಕ್ ಹಾಕಿದೆ. ಹಾಗಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗೆ ಬೇಡಿಕೆ ಹೆಚ್ಚಿದೆ. ಕಳೆದ ವರ್ಷಕ್ಕಿಂತಲೂ ಈ ಭಾರಿ ಮಣ್ಣಿನ ಪರಿಸರ ಸ್ನೇಹಿ ಗಣಪತಿ ಮಾಡಿಸಲು ಯುವ ಸಮೂಹ ಮುಂದಾಗಿದೆ.