ದೇಶದಲ್ಲಿ ಅರಾಜಕತೆ ಅಪಪ್ರಚಾರ ಮಾಡುವ ಶಕ್ತಿಗಳು ಹೆಚ್ಚು ಪ್ರಮಾಣದಲ್ಲಿ ಸಕ್ರೀಯವಾಗಿವೆ. ಸಮಾಜಕ್ಕೆ ತಪ್ಪು ಸಂದೇಶ ಕೊಡುವ ಪ್ರಯತ್ನಗಳು ನಡೆಯುತ್ತಿವೆ. ಸಿ.ಎ.ಎ ಜಾರಿ ವೇಳೆ ತಿಂಗಳಾನುಗಟ್ಟಲೇ ದೆಹಲಿಯಲ್ಲಿ ಹೋರಾಟ ನಡೆಯಿತು. ಸಿ.ಎ.ಎ ಪೌರತ್ವ ಕೊಡುವ ಕಾಯ್ದೆ ಆಗಿತ್ತು. ಆದರೆ, ಅದು ಪೌರತ್ವ ಕಿತ್ತುಕೋಳ್ಳುವ ಕಾಯ್ದೆ ಅಂತ ದೇಶದ ತುಂಬೆಲ್ಲ ಅಪಪ್ರಚಾರ ನಡೆಯಿತು ಅಂತ ಸಿ. ಟಿ ರವಿ ಹೇಳಿದರು.