ಬಾಗಲಕೋಟೆ ಜಿಲ್ಲಾ ಪೊಲೀಸರು ಕರ್ಕಶ ಶಬ್ದ ಮಾಡುವ ವಾಹನಗಳ ಸೈಲೆನ್ಸರಗಳನ್ನ ಜೆಸಿಬಿ ಮೂಲಕ ನಾಶಮಾಡಿದ ಘಟನೆ ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ನಡೆದಿದೆ.ಇಂಡಿಯನ್ ಮೋಟರ್ ವೆಹಿಕಲ್ ಆ್ಯಕ್ಟ್ ಪ್ರಕಾರ ನಿಯಮ ಪಾಲನೆ ಮಾಡದ ವಾಹನಗಳ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ.ಈ ವೇಳೆ ಮಾತನಾಡಿದ ಬಾಗಲಕೋಟೆ ಡಿವೈಎಸ್ಪಿ ಗಜಾನನ ಸುತಾರ್ ಅವರು ಮಾತನಾಡಿ ಮಾಹಿತಿ ನೀಡಿದ್ದು,ಸಂಚಾರಿ ನಿಯಮ ಪಾಲನೆ ಮಾಡದ ಹಾಗೂ ಕರ್ಕಶ ಶಬ್ದಗಳ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಹದಿನಾರು ವಾಹನಗಳನ್ನ ಪತ್ತೆ ಮಾಡಿ ಅವುಗಳ ಸೈಲೆನ್ಸರಗಳನ್ನ ನಾಶಮಾಡಲಾಗಿದೆ ಎಂದು ತಿಳಿಸಿದ್ದಾರೆ.