ದಾಂಡೇಲಿ : ನಗರದ ಸೌಂದರ್ಯಕರಣದ ಉದ್ದೇಶದಿಂದ ಪ್ರಮುಖ ರಸ್ತೆ ಯಾಗಿರುವ ಜೆ.ಎನ್ ರಸ್ತೆಗೆ ವಿನೂತನ ಶೈಲಿಯ ಬೀದಿ ದೀಪಗಳ ಅಳವಡಿಕೆಗೆ ಭಾನುವಾರ ಚಾಲನೆಯನ್ನು ನೀಡಲಾಗಿದೆ. ನಗರದ ಸೌಂದರ್ಯಕರಣಕ್ಕಾಗಿ ಶಾಸಕರಾದ ಆರ್.ವಿ.ದೇಶಪಾಂಡೆಯವರು ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದು, ಇದೀಗ ಆ ಅನುದಾನದಲ್ಲಿ ವಿನೂತನ ಶೈಲಿಯ ಬೀದಿ ದೀಪಗಳ ಅಳವಡಿಕೆಗೆ ಚಾಲನೆಯನ್ನು ನೀಡಲಾಗಿದ್ದು, ಭಾನುವಾರ ಬೆಳಿಗ್ಗೆ 11 ಗಂಟೆಗೆ ಹೊಸದಾದ ವಿದ್ಯುತ್ ಕಂಬಗಳ ಅಳವಡಿಕೆಗೆ ಚಾಲನೆಯನ್ನು ನೀಡಲಾಗಿದೆ.