ಕೆರೆಗೆ ನೀರು ಕುಡಿಯಲು ಬಂದ ಜಿಂಕೆಯನ್ನು ಸೀಳುನಾಯಿಗಳು ಬೇಟೆಯಾಡಿ, ಭಕ್ಷಿಸಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಣಿಯನಪುರ ಕಾಲೋನಿ ಸಮೀಪದ ಮಹದೇಶ್ವರ ದೇವಸ್ಥಾನದ ಕೆರೆಯಲ್ಲಿ ನಡೆದಿದೆ. ಸ್ಥಳೀಯರೊಬ್ಬರು ಸೀಳುನಾಯಿಗಳ ದೃಶ್ಯ ಸೆರೆ ಹಿಡಿದಿದ್ದಾರೆ. ನೀರನ್ನರಸಿ ಬಂದ ಜಿಂಕೆಯನ್ನ ಕಂಡ ಸೀಳು ನಾಯಿಗಳ ಹಿಂಡು ದಾಳಿ ನಡೆಸಿವೆ, ಜಿಂಕೆಯನ್ನ ಭೇಟೆಯಾಡಿದ್ದನ್ನ ಕಂಡ ಗ್ರಾಮದ ಬೀದಿನಾಯಿಗಳು ಕೆರೆ ಸಮೀಪ ಬಂದಂತ ವೇಳೆ ಸೀಳುನಾಯಿಗಳು ಹಿಮ್ಮೆಟ್ಟಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.