ಹುಲಿ, ಚಿರತೆ ಉಪಟಳಕ್ಕೆ ಬೇಸತ್ತು ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಬೋನಿನಲ್ಲಿ ಬಂಧಿಸಿ ಆಕ್ರೋಶ ಹೊರಹಾಕಿದ್ದ ಘಟನೆಗೆ ಸಂಬಂಧಿಸಿದಂತೆ ಐವರು ರೈತರ ಮೇಲೆ ಎಫ್ಐಆರ್ ದಾಖಲಾಗಿದೆ. ಇದಕ್ಕೆ ಪರಿಸರವಾದಿ ಜೋಸೆಫ್ ಹೂವರ್ ಕಿಡಿಕಾರಿದ್ದಾರೆ. ಬುಧವಾರ ಸಂಜೆ ಮಾಧ್ಯಮಕ್ಕೆ ಅವರು ಮಾತನಾಡಿ, ಕಳೆದ ಹಲವು ದಿನಗಳ ಹಿಂದೆ ಮಂಗಲ ಸಮೀಪ ಬೆಂಗಳೂರು ಮೂಲದ ವ್ಯಕ್ತಿ ಜಮೀನು ರಕ್ಷಣೆಗೆ ಬ್ಲೇಡ್ ಬೇಲಿ ಹಾಕಿದ್ದನು. ಇದು ಬೆಳಕಿಗೆ ಬಂದು ಆತನಿಂದ ಬ್ಲೇಡ್ ಬೇಲಿ ತೆರವು ಮಾಡಿ ಅಪಾಲಜಿ ಪಡೆದಿದ್ದರು. ಈಗ ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕಾಗಿರುವ ಘಟನೆಗೆ ರೈತರ ಮೇಲೆ ಎಫ್ ಐಆರ್ ಹಾಕಿರುವುದು ಸರಿಯಲ್ಲ ಎಂದರು. ರೈತರಿದ್ದರಷ್ಟೇ ಕಾಡು ಎಂಬುದನ್ನು ಅರಣ್ಯ ಇಲಾಖೆ ತಿಳಿದುಕೊಳ್ಳಬೇಕು ಎಂದು ಕಿಡಿಕಾರಿದರು .