ಚಿತ್ರದುರ್ಗದಲ್ಲಿ ಸೆ. 29 ರಂದು ವಿದ್ಯುತ್ ವ್ಯತ್ಯಯ ಆಗಲಿದ್ದಾಗಿ ಬೆಸ್ಕಾಂ ಪ್ರಕಟಣೆ ನೀಡಿದೆ. ಶನಿವಾರ ಸಂಜೆ 4 ಗಂಟೆಗೆ ಈ ಬಗ್ಗೆ ಇಲಾಖೆ ಮಾಹಿತಿ ನೀಡಿದೆ. ಇನ್ನೂ ಚಿತ್ರದುರ್ಗದಲ್ಲಿ ಸೆ. 29 ರಂದು ಕೆಲವು ಪ್ರದೇಶಗಳಲ್ಲಿ ಹಳೆಯ ವೈರ್ ಬದಲಾವಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.