ಎಡಗೈ ಮತ್ತು ಬಲಗೈ ಸಮುದಾಯಗಳು ಒಳಮೀಸಲಾತಿ ಸದ್ಬಳಕೆಗಾಗಿ ತಲೆಬಾಗಿ ಪುಸ್ತಕ ಓದಿ ಜಗತ್ತಿನಲ್ಲಿ ತಲೆ ಎತ್ತಿ ಬಾಳಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಸಲಹೆ ನೀಡಿದರು. ಶನಿವಾರ ಮಧ್ಯಹ್ನ 12 ಗಂಟೆಗೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾದಿಗ ಮಹಾಸಭಾದಿಂದ ದಾವಣಗೆರೆ ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮಕ್ಕೆ ತೆರಳಿದ ಮುಖಂಡರುಗಳಿಗೆ ಶುಭಕೋರಿ ಅವರು ಮಾತನಾಡಿದರು. ದಶಕಗಳಿಂದ ಸಂವಿಧಾನ ಬದ್ದ ಮೀಸಲಾತಿ ಹಕ್ಕಿದ್ದರೂ ಸಮರ್ಪಕ ಅವಕಾಶದಿಂದ ವಂಚಿತರಾದ ಎಡಗೈ ಬಲಗೈ ಸಮುದಾಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಿ ತಲಾ ಶೇ.6 ರಷ್ಟು ಒಳಮೀಸಲಾತಿ ನೀಡಿದ್ದು, ತಮ್ಮಲ್ಲೆರ ಸುದೈವವಾಗಿದೆ ಎಂದರು.