ಧರ್ಮಸ್ಥಳದ ವಿರುದ್ದ ಷಡ್ಯಂತ್ರ ಖಂಡಿಸಿ ಭಕ್ತರ ಚಲೋ ಹೋಟೆಲ್ ಉದ್ಯಮಿ ನಾರಾಯಣ ವಿ ಹೆಗಡೆ ನೇತೃತ್ವದಲ್ಲಿ ಮೈಸೂರಿನಿಂದ ಧರ್ಮಸ್ಥಳಕ್ಕೆ ಪ್ರಯಾಣ 500ಕ್ಕೂ ಹೆಚ್ಚು ಮಂದಿ 6 ಬಸ್ ಗಳಲ್ಲಿ ಮುಂಜಾನೆ 5.30ಕ್ಕೆ ಹೊರಟ ಭಕ್ತರು, ನಗರದ ನಂಜರಾಜ ಬಹದ್ದೂರ್ ಛತ್ರದಿಂದ ಪ್ರಯಾಣ ನಾರಾಯಣ ಹೆಗಡೆಗೆ ಸಾಥ್ ನೀಡಿದ ಮಾಜಿ ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್ ಹಾಗೂ ಸಮಾಜ ಸೇವಕ ರಘುರಾಂ ಕೆ ವಾಜಪೇಯಿ ಧರ್ಮಸ್ಥಳದ ವಿರುದ್ದಧ ಪಿತೂರಿಯನ್ನು ನಾವು ಸಹಿಸುವುದಿಲ್ಲ ಧರ್ಮಸ್ಥಳ ಶ್ರೀ ಕ್ಷೇತ್ರದ ಪಾವಿತ್ರ್ಯತೆ ಹಾಳು ಮಾಡಲು ಬಿಡಲ್ಲ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ನೈತಿಕ ಬಲ ತುಂಬಲು ಧರ್ಮಸ್ಥಳಕ್ಕೆ ಹೊರಟಿದ್ದೇವೆ ಧರ್ಮಸ್ಥಳದ ಪರ ಅಸಂಖ್ಯಾತ ಭಕ್ತರು ಧ್ವನಿ ಎತ್ತಿದ್ದಾರೆ.