ಧರ್ಮಸ್ಥಳ ಎಸ್ಐಟಿ ತನಿಖೆ ಕುರಿತು ಗುರುವಾರ ಸಂಜೆ 6 ಗಂಟೆ ಸುಮಾರಿಗೆ ವಿಕಾಸಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ತನಿಖೆಯನ್ನ ಏಜೆನ್ಸಿಯವರು ಮಾಡ್ತಿದ್ದಾರೆ, ತನಿಖಾ ರಿಪೋರ್ಟ್ ಅವರೇ ಕೊಡಬೇಕು. ಅನಾಮಿಕ ಕೊಟ್ಟ ದೂರು, ಅದರ ಮೇಲೆ ಉತ್ಖನನ ಮಾಡಿ ಸಿಕ್ಕ ವಸ್ತುಗಳ FSL ಕಳಿಸಲಾಗಿದೆ. ಇವರೆಲ್ಲಾ ಯಾವ ರೀತಿ ನೂರಾರು ಶವಗಳಿವೆ ಅಂತ ದೊಡ್ಡ ಮಟ್ಟದಲ್ಲಿ ಬಿಂಬಿಸಿದ್ರು.ಇದು ಪೂರ್ವ ನಿಯೋಜಿತ ಅಂತ ತನಿಖೆ ಮಾಡ್ತಿದ್ದಾರೆ. ದುರುದ್ದೇಶ ಇದೆಯಾ, ದ್ವೇಷ ಇದೆಯಾ ಅನ್ನೊದ್ರ ಬಗ್ಗೆ ಕೂಡ SIT ತನಿಖೆ ಮಾಡ್ತಿದೆ. ಪಾರದರ್ಶಕ ತನಿಖೆ ಮೂಲಕ ವರದಿ ತರಲು ತನಿಖೆ ನಡೆಯುತ್ತಿದೆ ಎಂದರು.