ದಾಂಡೇಲಿ : ಬೀದಿನಾಯಿಗಳ ಹಿಂಡೊಂದು ಕೋತಿಯ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಇಂದು ಸೋಮವಾರ ಸಂಜೆ 6:00 ಗಂಟೆ ಸುಮಾರಿಗೆ ನಗರದ ಸೋಮಾನಿ ವೃತ್ತದ ಹತ್ತಿರ ನಡೆದಿದೆ. ಬೀದಿ ನಾಯಿಗಳ ಹಿಂಡೊಂದು ಕೋತಿಯನ್ನು ಅಟ್ಟಾಡಿಸಿದೆ. ಈ ಸಂದರ್ಭದಲ್ಲಿ ತಕ್ಷಣವೇ ನ್ಯಾಯವಾದಿ ವಿಶ್ವನಾಥ ಜಾಧವ, ಮಾಜಿ ನಗರಸಭಾ ಸದಸ್ಯರಾದ ರವಿ ಸುತಾರ್ ಹಾಗೂ ಡ್ಯಾನ್ಸ್ ಮಾಸ್ಟರ್ ಅಭಿಷೇಕ್ ಪಾಟೀಲ್ ಅವರು ಬೀದಿ ನಾಯಿಗಳನ್ನು ಓಡಿಸಿ, ಕೋತಿಯನ್ನು ಸದ್ಯಕ್ಕೆ ರಕ್ಷಣೆ ಮಾಡಿದ್ದಾರೆ. ಗಂಭೀರ ಗಾಯಗೊಂಡ ಕೋತಿಗೆ ತಕ್ಷಣ ಚಿಕಿತ್ಸೆ ಕೊಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.