ಸಿಬಿಐ ಮತ್ತು ಎನ್ಐಎ ತನಿಖೆ ಬಿಜೆಪಿ ಒತ್ತಾಯ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಕಾಸಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಸಿಬಿಐ,ತನಿಖೆ ಕೂಡಿ ಅಂತ ಬಿಜೆಪಿ ಅವ್ರು ಕೇಳ್ತಾ ಇದ್ದಾರೆ ಅಲ್ವ, ದಯವಿಟ್ಟು ನಿಮ್ಮ ಕೇಂದ್ರ ಸರ್ಕಾರದ ಸಿಬಿಐ, ಎನ್ಐಎಯಲ್ಲಿ ಕರ್ನಾಟಕ ಕೇಸ್ ಗಳು ಬಾಕಿ ಇವೆ ಅಂತ ತಮಗೆ ಅರಿವು ಇದೀಯಾ ? ಇದು ನೋಡಿ ಪಟ್ಟಿ, ಸಿಬಿಐನಲ್ಲಿರುವ ಕರ್ನಾಟಕದ ಕೇಸ್ ಗಳ ಪಟ್ಟಿ 74 ಕೇಸ್ ಗಳಿವೆ, ಹಲವಾರು ವರ್ಷಗಳಿಂದ ಇವೆ. ಏನ್ ಮಾಡ್ತಾ ಇದ್ದೀರಪ್ಪ ತಾವು ? ಇವುಗಳ ತನಿಖೆ ಮಾಡೋಕೆ ಆಗ್ತಾ ಇಲ್ಲ ಅಂತ ಪ್ರಶ್ನೆ ಮಾಡಿದರು.