ನಿಗಮ ಮಂಡಳಿಗೆ ಸಮಗಾರ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ಸಮಾಜದ ಅಧ್ಯಕ್ಷ ನಾಗರಾಜ ಹೊಸಮನಿ ಒತ್ತಾಯಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬದಾಮಿ ಪಟ್ಟಣದಲ್ಲಿ ಮಾತನಾಡಿರುವ ಅವರು, ಸರಕಾರ ವಿವಿಧ ನಿಗಮ, ಮಂಡಳಿಗಳಿಗೆ 39 ಜನರನ್ನು ಆಯ್ಕೆಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಸಮಗಾರ ಸಮಾಜವನ್ನು ಪ್ರತಿನಿಧಿಸಲು ಯಾರೊಬ್ಬರೂ ವಿಧಾನ ಸಭಾ, ವಿಧಾನ ಪರಿಷತ್ ಸದಸ್ಯ, ನಿಗಮ, ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯ ಸ್ಥಾನವನ್ನು. ನೀಡಿರುವದಿಲ್ಲ. ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಸೇವೆ ಸಲ್ಲಿಸಿದ ಸಾಕಷ್ಟು ಜನ ಪ್ರತಿಭಾನ್ವಿತ ರಿದ್ದಾರೆ.ಕಾರಣ ಕೂಡಲೇ ಸರ್ಕಾರ,ಸಿಎಂ ಸಮಾಜದ ಪ್ರತಿಭಾನ್ವಿತ ರನ್ನು ಗುರುತಿಸಿ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಒತ್ತಾಯಿಸಿದ್ದಾರೆ.