ಚಿತ್ರದುರ್ಗ:ಚಿತ್ರದುರ್ಗದಲ್ಲಿ ನಾಳೆ ಹಿಂದೂ ಮಹಾ ಗಣಪತಿ ಬೃಹತ್ ಶೋಭಾಯಾತ್ರೆ ಹಿನ್ನೆಲೆ ಡಿಜೆ ಸೌಂಡ್ ಸಿಸ್ಟಂ ಬ್ಯಾನ್ ಮಾಡಿ ಆದೇಶ ಮಾಡಿರುವ ಜಿಲ್ಲಾಡಳಿತ. ಆದೇಶ ಉಲ್ಲಂಘಿಸಿ ತರಿಸಿದ್ದ ಡಿಜೆ ಸೌಂಡ್ ಸಿಸ್ಟಂ ಅನ್ನು ಶುಕ್ರವಾರ ಮಧ್ಯಾಹ್ನ 3ಗಂಟೆಗೆ ಪೊಲೀಸರು ಸೀಜ್ ಮಾಡಿದ್ದಾರೆ. ಚಿತ್ರದುರ್ಗಕ್ಕೆ ಬರುತ್ತಿದ್ದ ರಸ್ತೆಯಲ್ಲೇ ತಡೆದು ಸೀಜ್ ಮಾಡಿದ ಪೊಲೀಸ್. ಡಿಜೆ ಸೌಂಡ್ ಸಿಸ್ಟಂ ತರುತ್ತಿದ್ದ ಲಾರಿ ಸೀಸ್ ಮಾಡಿದ್ದಕ್ಕೆ ನೂರಾರು ಹಿಂದೂ ಕಾರ್ಯಕರ್ತರು ಸೇರಿ ಪೊಲೀಸರ ಮೇಲೆ ಅಸಮಧಾನ ಹೊರ ಹಾಕಿದ್ದಾರೆ.