ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ನ ಗುತ್ತಿಗೆ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೊಸ ಯೂನಿಯನ್ ಸ್ಥಾಪಿಸಿದ ಕಾರಣಕ್ಕೆ, ಕಂಪನಿಯು ಯಾವುದೇ ನೋಟಿಸ್ ನೀಡದೆ ಅವರನ್ನು ಕೆಲಸದಿಂದ ವಜಾ ಮಾಡಿದೆ ಎಂದು ಕಾರ್ಮಿಕರು ಕಾರವಾರ ನಗರದ ಪತ್ರಿಕಾಭವನದಲ್ಲಿ ಬುಧವಾರ ಸಂಜೆ 3.30ಕ್ಕೆ ಕಾರ್ಮಿಕ ಮಂಜುನಾಥ ಲಮಾಣಿ ಆರೋಪಿಸಿದ್ದಾರೆ. 2023ರ ಫೆಬ್ರವರಿ 23ರಂದು ಸಂಬಳದ ಕುರಿತು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದರೂ, ಈ ಬಗ್ಗೆ ಕಾರ್ಮಿಕರಿಗೆ ಯಾವುದೇ ಮಾಹಿತಿ ನೀಡಲಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕರಾದ ರಾಮಚಂದ್ರ ಕಾಂಬಳೆ ಅಹಮದ್ ಸಾಕಳ್ಳಿ ಮತ್ತು ಶಿವಾಜಿ ಗುರವ್ ಇದ್ದರು.