ವಿವಿಧತೆಯಲ್ಲಿ ಏಕತೆ ಸಾರುವ ದೇಶ ಭಾರತ. ಇಲ್ಲಿ ಎಲ್ಲಾ ಧರ್ಮೀಯರು ವಾಸಿಸುತ್ತಿದ್ದಾರೆ. ಪರಸ್ಪರ ಸಾಮರಸ್ಯ, ಬಾಂಧವ್ಯ, ಸಹೋದರತೆ ಇನ್ನು ಕೂಡ ಜೀವಂತವಾಗಿವೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ನಗರದಲ್ಲಿ ಸಾಮೂಹಿಕ ಗಣೇಶಮೂರ್ತಿಗಳ ವಿಸರ್ಜನೆ ಮೆರವಣಿಗೆ ವೇಳೆ ನಗರದ ಅಮ್ಮವಾರಿಪೇಟೆ ಬಳಿ ಭಾನುವಾರ 4 ಗಂಟೆಯಲ್ಲಿ ಮಜ್ಜಿಗೆ ವಿತರಿಸಿ ಸೌಹಾರ್ದತೆ ಮೆರೆದ ಮುಸ್ಲಿಂ ಸಮುದಾಯದ ಮುಖಂಡರು. ನಾವೆಲ್ಲ ಒಂದೇ ಎಂದು ದೇಶದ ಪರ ಹಾಗೂ ಗಣಪತಿಗೆ ಜೈಕಾರ ಕೂಗಿದರು. ಇದೇ ರೀತಿ ನಾವೆಲ್ಲರೂ ಒಂದಾಗಿ ಇರಬೇಕು ಯಾವುದೇ ಗಲಾಟೆ ಗಲಭೆ ಬೇಡ ಎಂದರು. ಈ ವೇಳೆ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು