ಟೆಂಪೋ ಟ್ರಾವೆಲ್ಸ್ ಗೆ ಈಚರ್ ಡಿಕ್ಕಿ 3 ಜನ ಸಾವು 16 ಜನರಿಗೆ ಗಂಭೀರ ಗಾಯ ಹಿಂಭಾಗದಿಂದ ಬಂದು ಈಚರ್ ಗಾಡಿ ಟೆಂಪೋ ಟ್ರಾವೆಲ್ಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಂಗಾರಪೇಟೆ ತಾಲ್ಲೂಕಿನ ಕಲ್ಕೆರೆ ಸಮೀಪ ನಡೆದಿದೆ ಬಂಗಾರಪೇಟೆ ತಾಲ್ಲೂಕಿನ ಐತಾಂಡಹಳ್ಳಿ ಹತ್ತಿರ ಇರುವ ಚೆನ್ನೈ ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಸಮೀಪ ವೈ. ಸ್ಪೇಸ್ ಕಂಪನಿಯವರು ಹೊಸ ಮಳಿಗೆಗಳ ಕಟ್ಟಡದ ಗುದ್ದಲಿಪೂಜೆ ಹಮ್ಮಿಕೊಂಡಿದ್ದು . ಸದರಿ ಕಾರ್ಯಕ್ರಮಕ್ಕೆ ಅಡುಗೆ ಮಾಡಲು ಬೆಂಗಳೂರಿನಿಂದ ಅಡುಗೆ ಭಟ್ಟರನ್ನು ಕರೆಸಲಾಗಿತ್ತು. ಕೆಲಸ ಮುಗಿಸಿಕೊಂಡು ಸಂಜೆ ಟೆಂಪೋ ಟ್ರಾವೆಲ್ಸ್ ನಲ್ಲಿ ವಾಪಸ್ಸು ಹೋಗುವಾಗ ಕಲ್ಕೆರೆ ಸಮೀಪ ತಿ